(07) Other Photos & News














ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ಮಂಚಿ  - ೩೦.೯.೨೦೧೨




ಮೂಡುಬಿದಿರೆಯಲ್ಲಿ  ೨.೯.೨೦೧೨ ರಂದು  ನಡೆದ  ಜಿಲ್ಲಾ  ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ
ಮೂರ್ತಿದೇರಾಜೆಗೆ ಸಂಮಾನ





































































         
   2012 ಮೇ 5 ಮತ್ತು 6 ಮಂಚಿ ಕುಕ್ಕಾಜೆಯಲ್ಲಿ, ಬಿ.ವಿ.ಕಾರಂತ ನಾಟಕೋತ್ಸವದ ಸಂದರ್ಭ
             ಗರ್ತಿಕೆರೆ ರಾಗಣ್ಣ  ಅವರ ಹಳೆಯ  ರಂಗ ಗೀತೆಗಳ  ಕಾರ್ಯಕ್ರಮ.
















          ಹಳೆಯ ರಂಗ ಗೀತೆ ಗಳನ್ನು ಸಮರ್ಥವಾಗಿ ಹಾಡುವ ಅಪರೂಪದ ಕೆಲವೇ ಗಾಯಕರಲ್ಲಿ ಗರ್ತಿಕೆರೆ ರಾಗಣ್ಣ ಮುಖ್ಯರು.
         ರಾಗಣ್ಣನೊಂದಿಗೆ ವೇಧಿಕೆ ಹಂಚಿಕೊಳ್ಳಲು "ಸಮ ಸಾಂ ಪ್ರತಿ" ತಂಡಕ್ಕೆ ಒಂದು ಅವಕಾಶ
******* 



ಮಕ್ಕಳ ರಂಗಭೂಮಿಯ ಪ್ರವೇಶಕ್ಕೆ ಕಾರಣರಾದ ಮೋಹನ ಸೋನ ಅವರಿಗೆ 

ಗೌರವಾರ್ಪಣೆ- "ಸಮಸಾಂಪ್ರತಿ"ತಂಡ ದಿಂದ
ಚೊಕ್ಕಾಡಿ-26.2.2012





























26.2.2012 ರಂದು ಚೊಕ್ಕಾಡಿ ಶ್ರೀ ರಾಮ ದೇವಸ್ಥಾನದ ವಾರ್ಷಿಕ ಉತ್ಸವದಲ್ಲಿ -
ಅಳಿಕೆ ಮಕ್ಕಳ "ರಂಗಪ್ಪನ ಕತೆ" ನಾಟಕ ಇತ್ತು. ಈ ಸಂದರ್ಭ ಈ ಗೌರವಾರ್ಪಣೆ.

"ಮಕ್ಕಳು ಯಾವತ್ತೂ carban copy ಆಗಿ ಬೆಳೆಯ ಬಾರದು,...original ಆಗಿಯೇ ಬೆಳೆಯಬೇಕು"
ಎನ್ನುವ ಮೋಹನ ಸೋನ...ಪ್ರಾಯಷಃ ನಿಜವಾದ ‘ಮಕ್ಕಳ ರಂಗಭೂಮಿ’ಯನ್ನು ಹುಟ್ಟು ಹಾಕಿದವರು.
ಪ್ರದರ್ಶನಕ್ಕಿಂತ ಪ್ರಕ್ರಿಯೆಯಲ್ಲಿ ಹೆಚ್ಚು ನಂಬಿಕೆ ಇಟ್ಟ ಒಬ್ಬ ನಿಜ ಅರ್ಥದ ಶಿಕ್ಷಕ.

1983 ರ  ಆಸುಪಾಸು,ಮೋಹನ ಸೋನ ವಿಟ್ಲಕ್ಕೆ ಬಂದಾಗ,
ಪ್ರತೀ ಸಂಜೆ ಅವರ ಜೊತೆ ಒಂದಷ್ಟು ಮಕ್ಕಳನ್ನು ಒಟ್ಟು ಸೇರಿಸುವ,ಒಬ್ಬ ಸಂಯೋಜಕನಾಗಿದ್ದ
ಮೊರ್ತಿ ದೇರಾಜೆ,  ಮೋಹನ ಸೋನ ಅವರ "ರಂಗ ಪ್ರಕ್ರಿಯೆ" ಯಿಂದ ಆಕರ್ಶಿತರಾಗಿ
ತನ್ನ ಅತ್ಯಂತ ಮೆಚ್ಚಿನ ಕ್ರಿಕೆಟ್ ಆಟ, ಸಂಘಟನಾ ಕಾರ್ಯಗಳನ್ನು ಮರೆತು,
ಮಕ್ಕಳ ಲೋಕದತ್ತ ಸೆಳೆಯಲ್ಪಟ್ಟು,
ಅವರೊಂದಿಗೆ
ದಿವಂಗತ ಸುರೆಶ್ ಹಂದಾಡಿ, ಶಂಕರ ಪ್ರಸಾದ್ ಕುಂಚಿನಡ್ಕ,ಶ್ಯಾಂ ಪ್ರಸಾದ್ ಕುಂಚಿನಡ್ಕ,
ಭಾರವಿ ದೇರಾಜೆ, ಪಾಣಿನಿ ದೇರಾಜೆ,ಸುಮತಿ ದೇರಾಜೆ, ಮೈಥಿಲಿ ದೇರಾಜೆ,
ಸುಧೀರ್ ಬಾಳೆಪುಣಿ, ತೇಜಸ್ವಿ ಜ್ಯೂನಿಯರ್ ಶಂಕರ್, ಯಶಸ್ವಿನಿ ಭಾರವಿ,ಸುಮಾ ಪಾಣಿನಿ.
ಮೊದಲಾದ
ಸಮಸಾಂಪ್ರತಿ ಯ ಸದಸ್ಯರೆಲ್ಲಾ ಮಕ್ಕಳ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಹೀಗೆ - 
"ಸಮ ಸಾಂ ಪ್ರತಿ"ಯು  ಮಕ್ಕಳ ರಂಗಭೂಮಿಯನ್ನು ಪ್ರವೇಶಿಸಲು ಕಾರಣರಾದ, 
ಮೋಹನ ಸೋನ ರಿಗೆ ಸಮಸಾಂಪ್ರತಿ ಸದಾ ಚಿರಋಣಿ.

*********




ಮಾಣಿಲದಲ್ಲಿ  ೧೫.೧೨.೨೦೧೨ರಂದು     ನಡೆದ  ಬಂಟ್ವಾಳ ತಾಲೂಕ್ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ
ಮೂರ್ತಿ ದೇರಾಜೆಗೆ ಸಂಮಾನ
























ಪ್ರೊಫೆಸರ್ ಸಿಂಧುವಳ್ಳಿ ಅನಂತಮೂರ್ತಿಯವರ ಮನೆ ಮೈಸೂರಿನ "ಸುರುಚಿ ರಂಗಮನೆ"ಯಲ್ಲಿ

ಪ್ರತೀ ಶನಿವಾರ ನಡೆಯುವ "ಕತೆ ಕೇಳೋಣ ಬನ್ನಿ" ಕಾರ್ಯಕ್ರಮದ  250 ನೆ ಕಂತು
ಕತೆ ಹೇಳಿದ್ದು - ಮೂರ್ತಿ ದೇರಾಜೆ
ವಂದನಾರ್ಪಣೆ- ಪ್ರೊಫೆಸರ್ ಎಚ್.ಕೆ.ರಾಮನಾಥ್ 
೨೬.೧೧.೨೦೧೧










***********



ಅಳಿಕೆಯ ಸತ್ಯ ಸಾಯೀ ವಿಹಾರದಲ್ಲಿ ನಡೆದ,  ದ. ಕ.ಜಿಲ್ಲಾ ೧೭ ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ,

ಕನ್ನಡ ಪತ್ರಿಕೆಗಳ ಬೃಹತ್ ಸಂಗ್ರಾಹಕರಾದ 
"ಸಮಸಾಂಪ್ರತಿ"ಯ
ಶಂಕರ ಪ್ರಸಾದರನ್ನು ಸಂಮಾನಿಸಿ ಗೌರವಿಸಲಾಯ್ತು.
೧೯.೧೧.೨೦೧೧










ಕರ್ಣಾಟಕ ನಾಟಕ ಅಕಾಡೆಮಿಯ "ಸುವರ್ಣರಂಗ ಪ್ರಶಸ್ತಿ"  
ಮೊರ್ತಿ ದೇರಾಜೆಗೆ
20.8.2011 - ರವೀಂದ್ರ ಕಲಾ ಕ್ಶೇತ್ರ,ಬೆಂಗಳೂರು
ಫೊಟೊ -ಅಕ್ಷರ ರಕ್ಷಿದಿ





**********









No comments:

Post a Comment