ವಿಟ್ಲದ ಪ್ರಾಕ್ತನ ರಂಗ ಇತಿಹಾಸ
ವಿಟ್ಲಹಾಗೂ ಆಸುಪಾಸಿನಲ್ಲಿ-
ಸುಮಾರು ೫೦ ವರ್ಷಗಳ ಹಿಂದೆ
ವಿಟ್ಲ ಬಾಬು ಮಾಸ್ತರ್ ಬಹುಮುಖ ಪ್ರತಿಭೆಯಿಂದ ಪ್ರಸಿದ್ಧರಾಗಿದ್ದರು.
ಬಹಳ ದೊಡ್ದ ಮಟ್ಟಿನ ಚಿತ್ರಕಲಾವಿದರಾಗಿದ್ದ ವಿಟ್ಲಬಾಬು ಮಾಸ್ತರ್
ನಾಟಕದ ದೃಶ್ಯ ವೈಭವವನ್ನು ಅದ್ಭುತವಾಗಿ ಸಿದ್ಧಗೊಳಿಸುತ್ತಿದ್ದರು.
ಅನೇಕ ಜಾದೂ ತಂತ್ರಗಳನ್ನು ತಮ್ಮದೇ ರೀತಿಯಲ್ಲಿ ಕಂಡೂ ಹಿಡಿದಿದ್ದ ಬಾಬು ಮಾಸ್ತರ್ -
ನಾಟಕದಲ್ಲಿ ಅದನ್ನು ಬಳಸುತ್ತಿದ್ದ ಉಲ್ಲೇಖ ಇದೆ.
(ಹನುಮಂತ ಸಮುದ್ರ ಹಾರುವ ದೃಶ್ಯದಂತ ದೃಶ್ಯಗಳು.)
ಕರ್ಣಾಟಕ ಯಕ್ಷಗಾನ ನಾಟಕ ಮಂಡಳಿ ಮಂಗಳೂರಿನಲ್ಲಿ ವಿಟ್ಲ ಬಾಬು ಮಾಸ್ತರ್ ರ ’ಸೀನು ಸೀನರಿ’ಗಳೊಂದಿಗೆ
ಹಲವು ವರ್ಷಗಳ ಕಾಲ ಜನ ಮನ ರಂಜಿಸಿದೆ. (ಚಿಕ್ಕಂದಿನಲ್ಲಿ ನೋಡಿದ ಮಸುಕು ನೆನಪು,ಹೆಚ್ಚಿನ ವಿವರ ತಿಳಿದಿಲ್ಲ)
ಪ್ರಸಿದ್ದ ಯಕ್ಷಗಾನ ಕಲಾವಿದ ವಿಟ್ಲದ ಅಳಿಕೆ ರಾಮಯ್ಯರೈಯವರು ಇದರಲ್ಲಿ ಪ್ರಮುಖ ಪಾತ್ರಧಾರಿ.
ಬಾಬು ಮಾಸ್ತರ್ ರ ಮೊಮ್ಮಗ ಮಂಜು ವಿಟ್ಲ ಚಿತ್ರ ಕಲಾವಿದರು.
ನಟ ನಿರ್ದೇಶಕರಾಗಿ ತುಂಬಾ ವರ್ಷದಿಂದ ರಂಗಭೂಮಿಯ ಕ್ಷೇತ್ರದಲ್ಲಿದ್ದಾರೆ.
(ತುಳು ನಾಟಕ ಮತ್ತು ಐತಿಹಾಸಿಕ ಸಾಂಪ್ರದಾಯಿಕ ನಾಟಕ)
ಇವರ ನೇತೃತ್ವದ ’ಉದಯೋನ್ಮುಖ ಕಲಾವಿದರು’ ತಂಡ ೭೦ ರ ದಶಕದಲ್ಲಿ ಚಟುವಟಿಕೆ ಪ್ರಾರಂಭಿಸಿತ್ತು.
ಸಾಂಪ್ರದಾಯಿಕ, ಐತಿಹಾಸಿಕ, ಪೌರಾಣಿಕ, ಕನ್ನಡ, ತುಳುನಾಟಕಗಳು
ಹಿಂದಿನಿಂದಲೂ ವಿಟ್ಲದಲ್ಲಿ ಸಾಕಷ್ಟು ಪ್ರದರ್ಶನಗೊಂಡಿದೆ.
ಬೇಡರ ಕಣ್ಣಪ್ಪ, ರಣದುಂದುಭಿ, ಸಮ್ರಾಟ್ ಅಶೋಕ, ಭಕ್ತ ಪ್ರಹ್ಲಾದ, ರಾಜಾ ಕೆಂಪೇಗೌಡ,
ಅಬ್ಬಕ್ಕ ದೇವಿ, ಹಗ್ಗದ ಕೊನೆ- ಮುಂತಾದವು ೭೦-೮೦ ದಶಕದ ಕೆಲವು ಪ್ರಮುಖ ನಾಟಕಗಳು.
ತಂಡದಲ್ಲಿ ಸಂಗೀತಗಾರರಾಗಿ ಸಹಕರಿಸುತ್ತಿದ್ದವರು-
ಪ್ರಸಿದ್ದ ಚಲನಚಿತ್ರ ಸಂಗೀತನಿರ್ದೇಶಕರಾದ ವಿ.ಮನೋಹರ್.
ಗೀತೆ ರಚನೆ ಮತ್ತು ಗಾಯಕರಾಗಿಯೂ ಅವರು ಸಹಕರಿಸುತ್ತಿದ್ದರು.
ಹಿನ್ನೆಲೆ ಗಾಯಕರಲ್ಲಿ,ರಮೇಶ್ ಆಚಾರ್ಯ, ಎ.ಬಾಬು,ಎನ್,ಪ್ರೇಮಾನಂದ ಭಟ್ ಪ್ರಮುಖರು.
ನಟರಾಗಿ - ಪ್ರೇಮಾನಂದ ಭಟ್, ಪರಮೇಶ್ವರ ಹೊಳ್ಳ, ಸುಬ್ರಹ್ಮಣ್ಯ ಹೊಳ್ಳ,ವಿ.ರಮಾನಾಥ,
ರವಿ ಜೋಶಿ, ಯಶು ವಿಟ್ಲ, ರತ್ನಾಕರ, ಕರುಣಾಕರ, ಉದಯ ಕುಮಾರ್, ಶ್ರೀಧರ್, ಮನೋಜ್,
ಗಂಗಾಧರ ಪೈ, ದೇವಿಪ್ರಸಾದ್, ಫೋನ್ ಶೀನಪ್ಪ, ವಿಟ್ಲಮಂಗೇಶ್ ಭಟ್, ಚೋಮನದುಡಿ ಸತೀಶ -ಪ್ರಮುಖರು.
ಚೋಮನದುಡಿ ಸಿನೇಮಾದಲ್ಲಿ ’ಧನಿ’ಸಂಕಪ್ಪಯ್ಯನಾಗಿ ನಟಿಸಿದ್ದ ಶಂಕರಭಟ್ಟರು ಒಬ್ಬ ಉತ್ತಮ ರಂಗ ನಟ.
ಉದ್ಯೋಗ ನಿಮಿತ್ತ ಪರಊರುಗಳಲ್ಲೇ ಹೆಚ್ಚು ಕಾಲಕಳೆದ ವಿಟ್ಲದ ಪೂವಪ್ಪ ಗೌಡ ಓರ್ವ ಒಳ್ಳೆಯ ನಟ.
ವಿಟ್ಲ ಅರಮನೆಯ ವರ್ಮಾ ಸಹೋದರರು ಸಂಗೀತದಲ್ಲಿ ಸಹಕರಿಸುತ್ತಿದ್ದರು.
ವಿಟ್ಲದ ಆಸು ಪಾಸಿನ ಊರಾದ-
ಕೋಡಪದವಿನ ನಿಟಿಲೆ ಜಯರಾಮ ಭಟ್ಟರು, ಪುಣಚದ ನೀರ್ಕಜೆ ಗಣಪತಿ ಭಟ್ಟರು,
ಮೈರದ ಬ್ಯಾಂಕ್ ಶೀನಪ್ಪ,ಅಡ್ಯನಡ್ಕದ ಸಾಯ ರಾಮ ಭಟ್,ಪೆರ್ವಡಿ ಸದಾಶಿವಭಟ್,
ಶೇಷಪ್ಪ ಆಚಾರಿ, ಸಿ.ನಾರಾಯಣ ಜೋಶಿ, ರಾಮಕೃಷ್ಣ ಜೋಶಿ, ಬರೆ ಕೇಶವ ಭಟ್, ವಿ.ಮ. ಭಟ್,
ಕನ್ಯಾನದ ಅಂಗ್ರಿ ಶಂಕರಭಟ್ಟರು, ಸಾಹಿತ್ಯ ಶಿರೋಮಣಿ ನೀರ್ಪಾಜೆ ಭೀಮ ಭಟ್ಟರು,-ಇವರು ಪ್ರಮುಖರು.
ಕರೋಪಾಡಿಯಲ್ಲಿ ಪ್ರಸಿದ್ದ ಯಕ್ಷಗಾನ ನಟ ಸಮ್ರಾಟ ಕುರಿಯ ವಿಠಲ ಶಾಸ್ತ್ರಿಗಳು
ಯಕ್ಶಗಾನ ನಾಟಕ ತಂಡ ಕಟ್ಟಿದ್ದರು.
ತಂಡದಲ್ಲಿ ದೇರಾಜೆ ಸೀತಾರಾಮಯ್ಯ,ಕೋಳ್ಯೂರು ರಾಮಚಂದ್ರ ರಾವ್, ಮುಂತಾದ ಪ್ರಮುಖರಿದ್ದರು.
ಕನ್ಯಾನ ಸಮೀಪದ ಬಾಯಾರು ಎಂಬಲ್ಲಿಯ, ’ಹೆದ್ದಾರಿ ಶಾಲಾ ಮಿತ್ರ ಮಂಡಳಿ’
ಬಾಯಾರು ಸುಬ್ಬಣ್ಣ ಭಟ್,ಶಾಮ ಭಟ್, ರಾಮಕೃಷ್ಣ ಭಟ್ ಸಹೋದರರ ನೇತೃತ್ವದಲ್ಲಿ,
ನೂರಾರು ನಾಟಕಗಳನ್ನಾಡಿತ್ತು.
ಪೆರ್ವಡಿ ದಿನಕರಭಟ್ಟರ ಸಂಗೀತ, ಪದ್ಯಾಣ ತಿಮ್ಮಣ್ಣಭಟ್ಟರ ಸಹಕಾರ.
ಖ್ಯಾತ ಸಾಹಿತಿ ’ಎಳೆಯರ ಗೆಳೆಯ’ ಮುಳಿಯ ಶಂಕರ ಭಟ್ಟರು
ನಾಟಕದ ನಟನಾಗಿಯೂ, ಏಕಪಾತ್ರಾಭಿನಯದಲ್ಲಿಯೂ ಪ್ರಸಿದ್ದರು.
ಮೂಲತಹ,ಕಬಕದವರಾದ ವಿಠಲ ಕಬಕ ಕಂಪೆನಿ ನಾಟಕ ತಂಡದ ಕಲಾವಿದರು(ವಿವರ ತಿಳಿದಿಲ್ಲ)
ಅಳಿಕೆಯ ಸತ್ಯಸಾಯೀ ಸಂಸ್ತೆಯ ಹಿರಿಯರಾದ ಮಾದಕಟ್ಟೆ ಈಶ್ವರಭಟ್ಟರು ಉತ್ತಮ ನಟ ಹಾಗೂ ನಿರ್ದೇಶಕ
ಮಂಚಿ - ಬಿ.ವಿ.ಕಾರಂತರ ಹುಟ್ಟೂರು.
ಕಾರಂತರೊಂದಿಗೆ ಅವರ ಸಹಪಾಠಿಗಳಾದ ಮಂಚಿಕಜೆ ಸಹೋದರರು-
ವೆಂಕಟ್ರಮಣ ಭಟ್,ಮಹಾಬಲಭಟ್ ಇನ್ನೂಮುಂತಾದವರು
ನನ್ನ ಗೋಪಾಲ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದರು(ಕಾರಂತರ ಆತ್ಮಕತೆಯಲ್ಲಿ ದಾಖಲಾಗಿದೆ)
*************೦೦೦೦೦೦೦೦೦**************
{ನನ್ನ ತಿಳುವಳಿಕೆಯ ವ್ಯಾಪ್ತಿ ಇಷ್ಟಕ್ಕೆ ಸೀಮಿತ - (ಮೂರ್ತಿ ದೇರಾಜೆ,ವಿಟ್ಲ)}
೧೯೮೪ ರಲ್ಲಿ ವಿಟ್ಲದ ರಂಗಾಸಕ್ತ ರಿಂದ ಮೋಹನ ಸೋನ ಅವರ ನಿರ್ದೇಶನದಲ್ಲಿ ತುಳುವಿನಲ್ಲಿ ಚೋಮನ ದುಡಿ ರಂಗವೇರಿತ್ತು.
ಪ್ರಕಟಿತ ನಾಟಕಗಳು (ಗಮನಕ್ಕೆ ಬಂದವುಗಳು)
ಮಾಲವಿಕಾಗ್ನಿಮಿತ್ರ - ನೀರ್ಪಾಜೆ ಭೀಮ ಭಟ್ (ಅಭ್ಯುದಯ ಪ್ರಕಾಶನ, ಕನ್ಯಾನ
ಊರ್ವಶಿ - ನೀರ್ಪಾಜೆ ಭೀಮ ಭಟ್ (ಅಭ್ಯುದಯ ಪ್ರಕಾಶನ, ಕನ್ಯಾನ)
ಮಣ್ಣಿನ ಬಂಡಿ - ನೀರ್ಪಾಜೆ ಭೀಮ ಭಟ್
ಮಾಲತೀ ಮಾದವ - ನೀರ್ಪಾಜೆ ಭೀಮ ಭಟ್
ಆನೆ ಮತ್ತು ಎನೋ - ಅಂಶುಮಾಲಿ ಕನ್ಯಾನ (ಭಾಸ್ಕರ.ಕೆ.)
ತಲೆ ಬುರುಡೆ - ಅಂಶುಮಾಲಿ ಕನ್ಯಾನ (ಭಾಸ್ಕರ.ಕೆ.)
ಪತ್ರೊಡೆ - ಅಂಶುಮಾಲಿ ಕನ್ಯಾನ (ಭಾಸ್ಕರ.ಕೆ.)
ಆರು ಹಿತವರು ನಿನಗೆ - ಪಕಳಕುಂಜ ಶಾಮಭಟ್
ಭಕ್ತ ದ್ರುವ - ತಲೆಂಗಳ ರಾಮಕೃಷ್ಣ ಭಟ್
ಕಣ್ಣಿದ್ದೂ ಕುರುಡರು - ತಲೆಂಗಳ ರಾಮಕೃಷ್ಣ ಭಟ್
ನಂಬ್ರಂದ ಜಂಬ್ರಕ್ಕೆ (ಹವ್ಯಕ) - ಪಡಾರು ಮಹಾಬಲೇಶ್ವರ ಭಟ್
ಶಕುಂತಲಾ - ವಿ.ಮ.ಭಟ್ ಅಡ್ಯನಡ್ಕ
ಕೂಸಕ್ಕನ ಮದುವೆ (ಹವ್ಯಕ) - ನರ್ಕಳ ಮಾರಪ್ಪ ಶೆಟ್ಟಿ
ಕಪ್ಪು ಕಾಗೆಯ ಹಾಡು - ಮೊರ್ತಿ ದೇರಾಜೆ (ಸಮನ್ವಯ ಪ್ರಕಾಶನ,ವಿಟ್ಲ)
ಗುಡುಗುಡು ಗುಮ್ಮಟ ದೇವರು - ಮೊರ್ತಿ ದೇರಾಜೆ (ಸಮನ್ವಯ ಪ್ರಕಾಶನ,ವಿಟ್ಲ)