ಬಿ.ವಿ.ಕಾರಂತ ನಾಟಕೋತ್ಸವ -೨೦೧೨ ಮಂಚಿ ಕುಕ್ಕಾಜೆ
೨೦೧೨ ಮೇ ೫ ಮತ್ತು ೬ ರಂದು
ಮಂಚಿ ಕುಕ್ಕಾಜೆ ಬಿ.ವಿ ಕಾರಂತ ರಂಗಭೂಮಿಕಾ ಟ್ರಸ್ಟ್ ನವರು
ಬೆಂಗಳೂರಿನ ಬಿ.ವಿ.ಕಾರಂತ ರಂಗಪ್ರತಿಷ್ಠಾನದ ಸಹಭಾಗಿತ್ವದಲ್ಲಿ
ಪ್ರಖ್ಯಾತ ನಾಟಕಕಾರ ಬಿ.ವಿ. ಕಾರಂತರ ನೆನಪಿನ ನಾಟಕೋತ್ಸವದ ಅಂಗವಾಗಿ
ಕೃಷ್ಣಮೂರ್ತಿ ಕವತ್ತಾರು ನಿರ್ದೇಶನದ ಡಾ.ಡಿ.ಕೆ.ಚೌಟರ ನಾಟಕ "ಮೂಜಿ ಮುಟ್ಟು, ಮೂಜಿ ಲೋಕ" ,
ಪ್ರ್ರಖ್ಯಾತ ಜಾದೂ ತಂಡ ಉಡುಪಿಯ ಗಿಲಿ ಗಿಲಿ ಮ್ಯಾಜಿಕ್ ನ ಪ್ರೊಫೆಸರ್ ಶಂಕರ್-ಜ್ಯೂನಿಯರ್ ಶಂಕರ್ ಅವರ
ಸಮಾಜ ಸೇವಾ ಕಾರ್ಯಕ್ರಮದ ಅಂಗವಾದ "ಅಕ್ಷಯ ವಸಂತ" ಕಾರ್ಯಕ್ರಮ,
ಪ್ರಖ್ಯಾತ ಹಾಡುಗಾರ ಹೊ. ನ. ರಾಘವೇಂದ್ರರ "ರಂಗಗೀತೆಗಳು" ಮತ್ತ್ತು
ಮೂರ್ತಿ ದೇರಾಜೆ -ಶಂಕರ್ ಪ್ರಸಾದ್ ನಿರ್ದೇಶನದಲ್ಲಿ
ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮಕ್ಕಳಿಂದ
"ಪೂರ್ವರಂಗದ ಕೊನೆಗೆ......" ಮತ್ತು "ಪುಣ್ಯಕೋಟಿ ಗೋವಿನ ಹಾಡು" ನಾಟಕ
ಬಂಟ್ವಾಳ ತಾಲೂಕಿನ ಮಂಚಿ-ಕುಕ್ಕ್ಕಾಜೆಯಲ್ಲಿ ಜರಗಿತು.
ಅಕ್ಷಯ ವಸಂತ ಕಾರ್ಯಕ್ರಮದಲ್ಲಿ
ಅಮಲು ಪದಾರ್ಥ, ಮದ್ಯಸೇವನೆ ಮುಂತಾದ ದುಷ್ಚಟಗಳ ದುಷ್ಪರಿಣಾಮಗಳ ಬಗ್ಗೆ,
ಜಾದೂ ವಿದ್ಯೆಯ ದುರುಪಯೋಗಗಳ ಬಗ್ಗೆ, ಜಾಗೃತಿಯನ್ನೂ;
ಆಧುನಿಕ ಬ್ಯಾಂಕಿಂಗ್ ಬಗ್ಗೆ ಮಾಹಿತಿಗಳನ್ನು ಜಾದೂ ಮೂಲಕ ನೀಡಲಾಯಿತು.
ಜನರನ್ನು ಮೊಬೈಲ್ ಸಂದೇಶಗಳ ಮೂಲಕ, ಟಿ.ವಿ.ಮಾಧ್ಯಮದ ಮೂಲಕ ನಂಬಿಸಿ
ಹಣ ಕೀಳುವ ವಿಧಾನಗಳನ್ನು ಕಾರ್ಯಕ್ರಮದಲ್ಲಿ ವಿವರಿಸಲಾಯಿತು.
ಅನಕ್ಷರಸ್ಥ ರೊಂದಿಗೆ ಇತ್ತೀಚೆಗೆ ಅಕ್ಷರಸ್ಥರನ್ನು ಕೂಡಾ ವಿವಿಧ ವಿಧಾನಗಳ ಮೂಲಕ
ಬಹು ಸುಲಭದಲ್ಲಿ ಯಾವ ರೀತಿಯಲ್ಲಿ ವಂಚಿಸಲಾಗುತ್ತಿದೆ
ಎಂಬುದನ್ನು ಕೂಡಾ ವಿವಿಧ ಜಾದೂ ಪ್ರಾತ್ಯಕ್ಷಿಕೆಗಳ ಮೂಲಕ ಮನ ಮುಟ್ಟುವಂತೆ ವಿವರಿಸಿ ತೋರಿಸಲಾಯಿತು.
ಕಳೆದ ವರ್ಷ ಮೇ ೫ರಂದು ೬೦ ವಸಂತಗಳನ್ನು ಪೂರೈಸಿದ ಪ್ರೊ. ಶಂಕರ್,
೫೦ ವರ್ಷಗಳ ಹಿಂದೆ ಜಿಲ್ಲೆಯ ಏಕೈಕ ಯಕ್ಷಿಣಿಗಾರನಾಗಿ ಮೂಡಿ ಬಂದವರು.
ಷಷ್ಟ್ಯಬ್ಧದ ಸಮಾರಂಭವನ್ನು ದುಂದುವೆಚ್ಚ ಮಾಡಿ ಅದ್ದೂರಿಯಾಗಿ ನಡೆಸುವ ಬದಲಾಗಿ
ಉಭಯ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಅಕ್ಷಯ ವಸಂತ ಕಾರ್ಯಕ್ರಮಗಳನ್ನು
ಯಾವುದೇ ಸಂಭಾವನೆ ಸ್ವೀಕರಿಸದೆ ವರ್ಷಪೂರ್ತಿ ನಡೆಸಲಾಗಿದೆ.
ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಜಾದೂಗಾರ ಜ್ಯೂನಿಯರ್ ಶಂಕರ್ ತಿಳಿಸಿದರು.
ಮೊದಲ ದಿನದ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ
ಬೆಂಗಳೂರಿನ ಬಿ.ವಿ.ಕಾರಂತ ರಂಗಭೂಮಿಕಾ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಜಯರಾಂ ಪಾಟೀಲ್;
ಸಾಹಿತಿಗಳಾದ ಡಾ. ಡಿ.ಕೆ.ಚೌಟ; ಪಡಾರು ಮಹಾಬಲೇಶ್ವರ ಭಟ್;
ರಾಸ್ತಾ- ಸೆಂಟರ್ ಫಾರ್ ರೋಡ್ ಟೆಕ್ನ್ನೋಲೋಜಿಯ ಅಡ್ಮಿನಿಸ್ಟ್ರೇಟರ್ ಶ್ರೀ ಕೆ. ಶಂಕರ್ ಐತಾಳ್ ಹಾಗೂ
ಬೆಂಗಳೂರಿನ ವೈಟ್ ಲಿಫ್ಟರ್ಸ್ ಅಸೋಸಿಯೇಶನ್ ನ ಕಾರ್ಯದರ್ಶಿ ಶ್ರೀ ಚಂದ್ರಹಾಸ ರೈ ಮುಂತಾದವರು ಉಪಸ್ಥಿತರಿದ್ದರು.
೬ ರಂದು ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಜಯರಾಂ ಪಾಟೀಲ್, ರಂಗ ನಿರ್ದೇಶಕ ಪ್ರಸಾದ್ ರಕ್ಷಿದಿ ಭಾಗವಹಿಸಿದ್ದರು.
**********
ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್,ಮಂಚಿ,ದ.ಕ.
ಬಿ.ವಿ.ಕಾರಂತ ರಂಗಪ್ರತಿಷ್ಠಾನ,ಬೆಂಗಳೂರು,
ಬಿ.ವಿ.ಕಾರಂತ ನೆನಪಿನ ನಾಟಕೋತ್ಸವ
2012 ಮೇ 5, ಶನಿವಾರ ಮತ್ತು ಮೇ 6, ರವಿವಾರ
ಮಂಚಿ ಕುಕ್ಕಾಜೆ ಶಾಲೆ.
ಮೇ 5, ಶನಿವಾರ,ಸಂಜೆ 5.30
ನಾಟಕೋತ್ಸವ ಉದ್ಘಾಟನೆ
ಆ ನಂತರ
ರಂಗಾವತಾರ ಬೆಂಗಳೂರು ಇವರಿಂದ
ನಾಟಕ
ಮೂಜಿ ಮುಟ್ಟು.... ಮೂಜಿ ಲೋಕ
ರಚನೆ - ಡಾ. ಡಿ.ಕೆ ಚೌಟ
ವಿನ್ಯಾಸ/ನಿರ್ದೇಶನ/ಸಂಗೀತ - ಕೃಷ್ಣಮೂರ್ತಿ ಕವ್ವತ್ತಾರ್
**********
ಮೇ 6, ರವಿವಾರ ಸಂಜೆ 5.30
ಹೊ.ನ.ರಾಘವೇಂದ್ರ ಗರ್ತಿಕೆರೆ ಇವರಿಂದ
ರಂಗ ಗೀತೆಗಳು
(ಹಳೆಯ ನಾಟಕದ ಹಾಡುಗಳು)
ಆನಂತರ
ಪುತ್ತೂರು ವಿವೇಕಾನಂದ ಕನ್ನಡ ಮಾದ್ಯಮ ಶಾಲೆಯ
ಸಮಸಾಂಪ್ರತಿ - ರಂಗನಾಟಕ ಶಿಬಿರ ದಶಮಾನೋತ್ಸವದಲ್ಲಿ
ರೂಪುಗೊಂಡ ಎರಡು ಮಕ್ಕಳ ನಾಟಕಗಳು
ಪೂರ್ವರಂಗದ ಕೊನೆಗೆ.......
ಪುಣ್ಯಕೋಟಿ ಗೋವಿನ ಹಾಡು
ವಿನ್ಯಾಸ/ನಿರ್ದೇಶನ
ಮೂರ್ತಿ ದೇರಾಜೆ - ಶಂಕರ ಪ್ರಸಾದ್
ರಂಗ ಸಿದ್ದತೆಯ ಅನುಕೂಲಕ್ಕಾಗಿ ಎರಡು ನಾಟಕಗಳ ನಡುವೆ ನಾಟಕೋತ್ಸವ ಸಮಾರೋಪ ಕಾರ್ಯಕ್ರಮ
ದಯವಿಟ್ಟು ಸಹಕರಿಸಿ
ನಮ್ಮೂರಿನ ಹೆಸರನ್ನು ಜಗದ್ವಿಖ್ಯಾತ ಗೊಳಿಸಿದ ಮಹಾನುಭಾವನ ನೆನಪನ್ನು ಹಂಚಿಕೊಳ್ಳೋಣ,
ಪ್ರೀತಿ ಇಟ್ಟು ಬನ್ನಿ
ಅಧ್ಯಕ್ಷ ಮತ್ತು ಸದಸ್ಯರು
ಬಿ.ವಿ.ಕಾರಂತ ರಂಗ ಭೂಮಿಕಾ ಟ್ರಸ್ಟ್,ಮಂಚಿ,ದ.ಕ.
No comments:
Post a Comment